ಯತ್ರ ನಾರ್ಯಸ್ತು ಪೂಜ್ಯಂತೆ ರಾಮಂತೆ ತತ್ರ ದೇವತಃ
ಎಲ್ಲಿ ಒಂದು ಸ್ತ್ರೀಯನ್ನು ಪೂಜಿಸುತ್ತೇವೋ ಅಲ್ಲಿ ದೇವತೆಗಳು ನೆಲಸಿರುತ್ತಾರೆ ಎಂಬುದು ವೇದಗಳಲ್ಲಿ ಹೇಳಲಾಗಿದೆ, ಆದರೂ ಹೆಣ್ಣಿನ ಮೇಲಾಗುತ್ತಿರುವ ಅತ್ಯಾಚಾರ ಶೋಷಣೆ ದಬ್ಬಾಳಿಕೆ ಇನ್ನೂ ಕಡಿಮೆಯಾಗಿಲ್ಲ. ಹೆಣ್ಣು ಅಬಲೆಯಲ್ಲ ಸಬಲೆಯೆಂದು ಪ್ರತಿ ಯುಗದಲ್ಲಿಯೂ, ಶತಮಾನದಲ್ಲಿಯೂ ಅವಳು ನಿರೂಪಿಸುತ್ತಿದ್ದರು ಹೆಣ್ಣಿನ ಮೇಲೆನ ಕೀಳರಿಮೆಯ ಭಾವನೆ ಈ ಸಮಾಜದಲ್ಲಿ ಇನ್ನೂ ಕಡಿಮೆಯಾಗಿಲ್ಲ. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿಯೆಂಬಂತೆ ಪ್ರತಿ ಹೆಣ್ಣಿನಲ್ಲು ಪಾರ್ವತಿಯಂತೆ ಸೌಮ್ಯ ಮೃದು ಸ್ವಭಾವವಿದ್ದರೂ ಆಕೆ ಲೋಕಕಲ್ಯಾಣಕ್ಕಾಗಿ ಹಾಗೂ ಆತ್ಮರಕ್ಷಣೆಗೆ ದುರ್ಗೆಯಂತೆ ಪರಾಕ್ರಮ ಮತ್ತು ಧೈರ್ಯವನ್ನು ಸಹ ತೋರುವಳು. ಕೆಟ್ಟದು ಮತ್ತು ಒಳ್ಳೆಯದರ ನಡುವಿನ ಘರ್ಷಣೆ ನಿತ್ಯ ಕಾಲಿನ ದೃಶ್ಯ ಹಾಗೂ ಸತ್ಯಕ್ಕೆ ಯಾವಾಗಲೂ ಜಯ ಸಿಗುವುದೆಂಬುದು ಸರ್ವಕಾಲಿನ ಸತ್ಯವೂ ಹೌದು. ಮಹಿಷಾಸುರನು ಹುಟ್ಟಿನಿಂದಲೂ ಅಸುರನಲ್ಲ. ಸಮಯ ಸಂಧರ್ಭಗಳು ಮೃಧುಸ್ವಭಾವನಾದ ಅವನನ್ನು ರಾಕ್ಷಸನ್ನನಾಗಿ ಪರಿವರ್ತಿಸಿದವು. ತನ್ನೊಳಗಿನ ದ್ವೇಷ ಮತ್ತು ಕ್ರೋದಾಗ್ನಿಗೆ ಬಲಿಯಾಗಿ ಮಾನವತೆ ಮರೆತು ಅಸುರ ಸ್ವಭಾವದವನಾದ. ಮನುಷ್ಯನು ಸಹ ತನ್ನೊಳಗಿನ ಪ್ರಜ್ಞೆಯನ್ನು ಮರೆತು ಅರಿಷಡ್ವರ್ಗಗಳ ಪ್ರಭಾವದಿಂದಾಗಿ ಮೃಗದದಂತೆ ವರ್ತಿಸುತ್ತಾನೆ. ಮಹಿಷಾಸುರನಿಗು ಮತ್ತು ಅತ್ಯಾಚಾರಕ್ಕೂ ಯಾವುದೇ ನೇರ ಸಂಬಂಧವಿಲ್ಲದಿದ್ದರೂ ಎರಡರಲ್ಲೂ ಮಾನವನ ರಾಕ್ಷಸ ಪ್ರವೃತ್ತಿಗೆ ಎರಡು ಕನ್ನಡಿಗಳಾಗಿವೆ. ಮೈಸೂರು ತನ್ನ ಪಾರಂಪರಿಕ ಮತ್ತು ಚಾರಿತ್ರಿಕ ಇತಿಹಾಸಕ್ಕೆ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ ವಿಶ್ವವಿಖ್ಯಾತ ಅದನ್ನು ನೋಡಲು ಕೋಟ್ಯಂತರ ಜನ ಬರುತ್ತಾರೆ ಮತ್ತು ಬದುಕು ಕಟ್ಟಿಕೊಳ್ಳಲು ಸಹ ಲಕ್ಷಾಂತರ ಜನ ಬರುತ್ತಾರೆ. ಈ ಸಂಭ್ರಮ ಸಡಗರಗಳ ನಡುವೆ ballon ಮಾರುವ ಹುಡುಗಿಯ ಮೇಲೆ ಅತ್ಯಾಚಾರವಾಗಿರುವ ಕರಾಳ ಘಟನೆಯು ಕಳೆದ ದಸರಾ ಉತ್ಸವದಲ್ಲಿ ನಡೆಯಿತು. ದಸರಾ ಹಬ್ಬವು ಕೆಡುಕಿನ ಮೇಲೆ ಒಳಿತಿನ ಜಯದ ಪ್ರತೀಕ ಆ ಹೆಣ್ಣು ತಾಯಿ ದುರ್ಗೆಯ ಪ್ರೇರೇಪಣಗೊಂಡು ಶಕ್ತಿಯ ಅವತಾರ ತಾಳಿ ತನ್ನಮೇಲೆರಗಿ ಬಂದ ದುಷ್ಟನನ್ನು ವಧಿಸುವ ಕಲ್ಪಾನಾತ್ಮಿಕ ಘಟನೆಯನ್ನು ತೋರ್ಪಡಿಸುವ ಒಂದು ಸಣ್ಣ ಪ್ರಯತ್ನವೇ ನಮ್ಮೀ ನಾಟಕ ಮಹೊರ್ಣ.
























