'ಮರೆತ ದಾರಿ' ನಾಟಕವು ಬಾದಲ್ ಸರ್ಕಾರ್ ಅವರು ಬರೆಯಬೇಕೆಂದಿದ್ದ ತಮ್ಮ ಕೊನೆಯ ನಾಟಕ 'ಭೂಲ್ ರಾಸ್ತಾ'ಗೆ ಮಾಡಿಕೊಂಡಿದ್ದ ಟಿಪ್ಪಣಿಗಳ ಪರಿಕಲ್ಪನೆಯನ್ನು ಆಧರಿಸಿದ್ದು, ಸರ್ವಾಧಿಕಾರದ ಗೆದ್ದಲು ಹಿಡಿದ ವ್ಯವಸ್ಥೆಯ ಭಾಗವಾಗಿದ್ದ ರಾಜಕುಮಾರನೊಬ್ಬ ಕಣ್ಗಾಡಲ್ಲಿ ದಾರಿಗೆಟ್ಟು ನಿಸರ್ಗ ಸಹಜವೂ, ಆನಂದಮಯವೂ ಆದ ಜೀವಂತಿಕೆ ಪುಟಿಯುವ ಆದಿವಾಸಿಗಳ ಭಿನ್ನ ಬದುಕಿನ ದಾರಿಗೆ ಬಿದ್ದು, ಅಮೂಲ್ಯವೆಂಬಂತಹ ಸಾಪೇಕ್ಷ ಸತ್ಯ ಅರಿತು, ಕಾಡಿನ ಒಡಲಲ್ಲೇ ಉಳಿಯುವ ವಿವೇಕದ ನಿರ್ಧಾರಕ್ಕೆ ತಲುಪುತ್ತಾನೆ. ಮನುಕುಲ ನಿಸರ್ಗದ ನಾಡಿ ಬಡಿತಕ್ಕೆ ದೂರವಾಗಿರುವುದೇ ಅಲ್ಲದೇ, ಅದಕ್ಕೆ ತದ್ವಿರುದ್ಧವಾದ ವಿನಾಶದ ಹಾದಿ ಹಿಡಿದಿರುವುದನ್ನು ಮನಗಂಡು ಬದುಕಿನ 'ಮರೆತ ದಾರಿ'ಗೇ ತಾನು ಮರಳಿರುವುದಾಗಿ. ಭಾವಿಸುತ್ತಾನೆ. ಆದರೆ ನಾವು ಮರೆತಿರುವುದು ಕೇವಲ ಪ್ರಕೃತಿಯ ತಾಯಿಕರುಳ ಹಾದಿಯನ್ನಷ್ಟೇ ಅಲ್ಲ ; ಜೊತೆಗೆ ನಮ್ಮ ನಮ್ಮ ಮೂಲ ಸಂಸ್ಕೃತಿಯ ಗುರುತು, ಆತ್ಮಗೌರವದ ಅಸ್ಥಿತೆ ಹಾಗೂ ಅಸ್ತಿತ್ವಗಳನ್ನು ಕೂಡ | ಈ ಗ್ರಹಿಕೆಯ ಹಿನ್ನೆಲೆಯೊಂದಿಗೆ ಆದಿವಾಸಿಗಳು ತಮ್ಮ ನಂಬಿಕೆಯ ಮೂಲಕ ಜತನವಾಗಿ ಕಾಪಿಟ್ಟುಕೊಂಡು ಬಂದ ಲೋಕದ ಜೀವಬಳ್ಳಿಯ ಆದಿ ಕಥೆಯೇ ಅವರ ಸರಳ ಆಚರಣೆಯೊಂದರಲ್ಲಿ ರಾಜಕುಮಾರನ ಎದುರಿಗೆ ತನ್ನ ಅನಾದಿಯಾದ ವಿರಾಧ್ವಪದ ಬೆರಗಿನ ನಕ್ಷೆಯನ್ನೇ ತೆರೆದಿಡುತ್ತದೆ. ಬಾಹ್ಯ ಜಗತ್ತಿನ ಬಳುವಳಿಯಾದ ಎಲ್ಲಾ ಅಮಲುಗಳಾಜೆಗೆ ಅವನ ಸಂಸ್ಕೃತಿಯ ಚಿಗುರುಮೂಲವನ್ನು ನೆನಪಿಸಿಕೊಡುತ್ತದೆ. ಜಗತ್ತಿನ ಮೊಟ್ಟ ಮೊದಲ ಕಥೆಯಾದ ಏಳು ಮಂದಿ ಅಕ್ಕತಂಗೇರರ ಜೊತೆಗೆ ತನಗಿರುವ ಕಳ್ಳುಬಳ್ಳಿಯ ಸಂಬಂಧವನ್ನು ಗಾಢ ರೀತಿಯಲ್ಲಿ ಕಲ್ಪಿಸಿಕೊಡುವುದರೊಂದಿಗೆ ಅವನನ್ನು ಆವರಿಸಿರುವ ವಿಸೃತಿಯ ಸಂಕೋಲೆಗಳೂ ಕಳಚಿಬೀಳುತ್ತವೆ. ಆಫ್ರಿಕಾದ ಮೀನ್ಶಣ್ಣಿಯಾಗಿ ಬದಲುಗೊಂಡಿರುವ ಸತ್ಯವೂ ಸ್ಪಷ್ಟವಾಗುತ್ತದೆ. ತನ್ನ ಮೂಲ ಸಂಸ್ಕೃತಿಯನ್ನೇ ಮರೆತಿದ್ದದ್ದು ತನ್ನನ್ನು ಜೀವ೦ತ ಕಲೇವರವಾಗಿಸಿತ್ತೆಂಬ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಡುತ್ತದೆ. ನಾಟಕದ ಮೊದಲರ್ಧ ಭಾಗವು ಉದ್ದೇಶಪೂರ್ವಕವೆಂಬಂತೆಯೇ ಇಂದಿನ ನೀರಸವೂ, ಸತ್ವಹೀನವೂ ಆದ ಬದುಕಿನ ಒಣವೈಖರಿಯಲ್ಲೇ ಸಾಗಿ, ನಂತರ ಉತ್ತರಾರ್ಧದಲ್ಲಿ ನಾವು ಕಳೆದುಕೊಂಡಿರುವ ಸಂಸ್ಕೃತಿ ಸಿರಿಯ ಒಂದೆಳೆಯನ್ನಷ್ಟೇ ಪ್ರೇಕ್ಷಕರೆದುರಿಗೆ ಮುಖಾಮುಖಿಯಾಗಿಸಿ, ಎರಡೂ ದಾರಿಗಳಲ್ಲಿನ ವ್ಯತ್ಯಾಸವನ್ನು ಕಾಣಿಸಿ, ಪ್ರಕೃತಿ-ಸಂಸ್ಕೃತಿಯೆಂಬ ಇಬ್ಬರು ತಾಯಂದಿರಿಗೂ ತಾನು ಎರವಾಗಿರುವ ಅನಾಥತೆಯನ್ನು ಕಾಣಿಸಿಕೊಡುತ್ತದೆ. ವಿಕೃತ ಹಾಗೂ ಜೀವಂತಿಕೆಯ ಮುಖಾಮುಖಿಯೇ 'ಮರೆತ ದಾರಿ' ಯಾವುದೆಂಬುದನ್ನು ನಾಟಕ ತಿಳಿಯಾಗಿಸುತ್ತೆ.
























