top of page
ರಾಷ್ಟ್ರಕವಿ ಶ್ರೀ ಕುವೆಂಪು ವಿರಚಿತ ಮಹಾಕಾವ್ಯ ಜ್ಞಾನಪೀಠ ಪುರಸ್ಕೃತ ಕೃತಿ ಶ್ರೀರಾಮಾಯಣ ದರ್ಶನಂನ ಆಯ್ದಭಾಗದ ಪ್ರಸ್ತುತಿ 'ದರ್ಶನಂ' ದಶಕಗಳವರೆಗೂ ಶ್ರೀರಾಮನ ದರುಶನಕ್ಕಾಗೇ ಕಾದಿರುವ ಮಾತೆ ಶಬರಿ. ಈ ರಂಗಕೃತಿಯಲ್ಲಿ ಕೇವಲ ಒಬ್ಬಳು ಶಬರಿಯಿರದೇ ಭಕ್ತಿಪರಂಪರೆಯ ಪ್ರತಿನಿಧಿಗಳಂತೆ ಹಲವಾರು ಶಬರಿಯರು ಕಣ್ಮುಂದೆ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಶಬರಿಯ ಭಕ್ತಿಯ ಪರಾಕಾಷ್ಠೆಯಿದೆ, ಶ್ರೀರಾಮನ ಅಂತಃಕರಣದ ಒಲವು, ಲಕ್ಷ್ಮಣನ ಕರ್ತವ್ಯ ಪ್ರಜ್ಞೆ , ಸೀತೆಯ ರೋಧನೆ, ಚಂದ್ರನಖಿಯ ಆಕ್ರಂದನ, ರಾವಣನ ಆಕ್ರೋಷ, ಮಾರೀಚನ ಸತ್ಯಪರತೆ, ಜಟಾಯುವಿನ ಸ್ವಾಮಿನಿಷ್ಠೆ ಈ ಎಲ್ಲಾ ಸಂಗತಿಗಳು ಈ ರಂಗಕೃತಿಯಲ್ಲಿ ಶ್ರೀ ಕುವೆಂಪುರವರ ದರ್ಶನವಾಗಿ ಮೇಳೈಸಿದೆ. ಈ ರಂಗಕೃತಿಯು ವಿಭಿನ್ನ ಮಾದರಿಯ ನಟನೆ, ಕೂಡಿಯಾಟ್ಟಂ, ಮೋಹಿನಿಯಾಟ್ಟಂ, ಕಳರಿ ಮಂತಾದ ಸಾಂಪ್ರಾದಾಯಿಕ ಕಲೆಗಳನ್ನು ಅನ್ವಯಿಸಿಕೊಂಡು ಕಟ್ಟಿದ ಒಂದು ಕಲಾಕೃತಿಯಾಗಿದೆ. ಮಹಾಕವಿಯ ಮೇರುಕೃತಿಯ ದಿಗ್ದರ್ಶನವು ಸಹೃದಯಿ ಪ್ರೇಕ್ಷಕರನ್ನು ತಲುಪಲಿ ಎಂಬುದೇ ಇಡೀ ತಂಡದ ಆಶಯವಾಗಿದೆ

bottom of page























