ಚಕ್ರವ್ಯೂಹದೊಳಗೊಂದು ತಾಯಿ-ಮಗನ ಕರುಳ ಬಳ್ಳಿ "ವೀರರಿಗೆ ಪ್ರವೇಶದ ಹಾದಿ ಸದಾ ಮುಕ್ತ, ಆದರೆ ನಿರ್ಗಮನದ ರಹಸ್ಯ ದೇವರಿಗಷ್ಟೇ ಮೀಸಲು." ರೇವಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಮೂಡಿಬರುತ್ತಿರುವ, ಕಾಳಗ ನಾಟಕವು ರಂಗಭೂಮಿಯ ಮೇಲೆ ಹೊಸ ಸಂಚಲನ ಮೂಡಿಸಲು ಸಿದ್ಧವಾಗಿದೆ. ಇದು ಕೇವಲ ಪುರಾಣದ ಕಥೆಯಲ್ಲ; 16ನೇ ಶತಮಾನದ ಕುಮಾರವ್ಯಾಸನ ಗಂಭೀರ ಕಾವ್ಯಕ್ಕೂ, ವೈಕಿಂಗ್ ಮಾದರಿಯ ಬುಡಕಟ್ಟು ಸಂಸ್ಕೃತಿಗೂ ಬೆಸೆದ ಅದ್ಭುತ ಕಲಾ ಸೇತುವೆ. ಶೌರ್ಯ ಮತ್ತು ಮಾತೃತ್ವದ ಸಂಗಮ ಕುರುಕ್ಷೇತ್ರದ ಭೀಕರ ಯುದ್ಧದ ನಡುವೆ ಅಜೇಯ ಚಕ್ರವ್ಯೂಹವನ್ನು ಭೇದಿಸಿದ ಬಾಲವೀರ ಅಭಿಮನ್ಯುವಿನ ಸಾಹಸ ಈ ನಾಟಕದ ಜೀವಾಳ. ಸುಭದ್ರೆಯ ಗರ್ಭದಲ್ಲಿ ಚಿಗುರಿದ ಕನಸಿನಿಂದ ಹಿಡಿದು, ಯುದ್ಧಭೂಮಿಯ ರಕ್ತಸಿಕ್ತ ಮೌನದವರೆಗೆ ಹರಡಿರುವ 'ವಿಶ್ವ ಮಾತೃತ್ವ'ದ ಸಂವೇದನೆಯನ್ನು ಈ ನಾಟಕ ಚಿತ್ರಿಸುತ್ತದೆ. ತನ್ನ ಮಗನನ್ನು ಬಲಿಗೊಟ್ಟ ತಾಯಿಯ ಮೌನ ರೋದನ ಇಲ್ಲಿ ಯುದ್ಧದ ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತದೆ. ರಂಗದ ಮೇಲೆ ಸಮರ ಕಲೆಗಳ ವೈಭವ 'ಮೂವ್ಮೆಂಟ್ ಡಿವೈಸಿಂಗ್' ತಂತ್ರದ ಮೂಲಕ ರೂಪಿಸಲಾದ ಈ ನಾಟಕವು ದೃಶ್ಯ ವೈಭವದ ಹೂರಣವಾಗಿದೆ. ಸಮರ ಕಲೆ: ಕಲರಿಪಯಟ್ಟು, ಮುಯ್ ಥಾಯ್, ಸಿಲಂಬಂ ಮತ್ತು ದೇಸೀ ಕುಸ್ತಿಯ ಸಮ್ಮಿಲನ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ.
ಈ ವ್ಯವಸ್ಥೆಯ ವಿರುದ್ಧ ಹೋರಾಡುವ ಪ್ರತಿಯೊಬ್ಬ ಯುವಕನಲ್ಲೂ ಅಭಿಮನ್ಯು ಬದುಕಿದ್ದಾನೆ. 'ಕಾಳಗ' ಕೇವಲ ಇತಿಹಾಸದ ಪುಟವಲ್ಲ, ಅದು ಇಂದಿನ ಬದುಕಿನ ಅನಿವಾರ್ಯ ಸಂಘರ್ಷ. ಇತಿಹಾಸದ ಯುದ್ಧವ ಮಕ್ಕಳಿಲ್ಲದ ತಾಯಿಯ ಕಣ್ಣೀರನ್ನ ಈ ನಾಟಕದ ತೋರುತ್ತದೆ ಈ ಮಹಾಸಂಗಮದ ಕಾವ್ಯಕ್ಕೆ ಸಾಕ್ಷಿಯಾಗಿ.
























