top of page
ಜಮ೯ನಿಯ ಪ್ರಸಿದ್ಧ ನಾಟಕಕಾರ ಬಟೋ೯ಲ್ಟ್ ಬ್ರೆಕ್ಟ್ ಬರೆದ ನಾಟಕ “ಮದರ್ ಕರೇಜ್” . ಯುದ್ಧ ಸಾಮಾನ್ಯ ಜನರ ಬದುಕನ್ನು ಕಸಿಯುವ ಭೀಕರ ಪ್ರಕ್ರಿಯೆ. ಯುದ್ಧ ಭೂಮಿಯಲ್ಲಿ ತನ್ನ ಮಕ್ಕಳನ್ನು ಕಳೆದುಕೊಂಡರೂ ತನ್ನ ಬದುಕಿನ ಬಂಡಿಯನ್ನು ಸಾಗಿಸುವ ಧೀರ ಮಹಿಳೆ ‘ಮದರ್ ಕರೇಜ್. ಮದರ್ ಕರೇಜ್ ನ ಮಕ್ಕಳಾದ ಈಲಿಫ್ ನ ವೀರತನ, ಸ್ವಿಸ್ ನ ಪ್ರಾಮಾಣಿಕತೆ ಹಾಗೂ ಕ್ಯಾತ್ರೀನ್ ನ ಕರುಣೆಯ ಗುಣಗಳೇ ಅವರ ದುರಂತಕ್ಕೆ ಕಾರಣವಾಗುತ್ತದೆ.“ ಯುದ್ಧ ನಮ್ ಜೀವನಕ್ಕೆ ಬೇಕಾಗಿರೋದನ್ನೆಲ್ಲಾ ಕೊಡುತ್ತೆ, ಒಂದು ದಿನ ಹಾಗೇ ಜೀವನಾನೇ ಕಿತ್ಕೊಳುತ್ತೆ” ಎಂಬ ಮಾತು ಯುದ್ಧದ ಕ್ರೌಯ೯ವನ್ನು ಧ್ವನಿಸುತ್ತದೆ.

bottom of page























