ಆಧ ಅಧೂರೇ ನಮ್ಮ ಸಮಕಾಲೀನ ಬದುಕಿನ ಅತ್ಯ೦ತ ಅರ್ಥಪೂರ್ಣವಾದ ಪ್ರಪ್ರಥಮ ಹಿಂದಿ ನಾಟಕ. ನಮ್ಮೆಲ್ಲರ ಬದುಕಿನಲ್ಲಿ. ಸಂಭವಿಸುವ ಮಹತ್ವದ ಪರಿಸ್ಥಿತಿಗಳನ್ನು ವಿಡಂಬಿಸುವ ವಿಶಿಷ್ಟ ನಾಟಕ. ಇದರಲ್ಲಿ ಬರುವ ಪಾತ್ರಗಳು, ಪರಿಸ್ಥಿತಿಗಳು, ಮನ್ನುಸ್ಥಿತಿಗಳು ನಮ್ಮದೇ ಬದುಕಿನ ವಾಸ್ತವ ಕನ್ನಡಿಯಂತಿವೆ. ಅಭಿನಯದ ದೃಷ್ಟಿಯಿಂದ ರಂಗ ಭೂಮಿಯಲ್ಲಿ ಸಂಪೂರ್ಣ ಯಶಸ್ವಿಯಾಗುವ ಈ ನಾಟಕ ಪ್ರತಿಯೊಂದು ಗ೦ಡು ಹೆಣ್ಣಿನ ಅ ೦ತರಾಳವನ್ನು ಪರೀಕ್ಷಿಸುವ ಚಿತ್ರಣವೂ ಆಗಿದೆ. ರಂಗಪ್ರಚ್ಚೆ ಮತ್ತು ಜೀವನ ಪರೀಕ್ಷಣೆಗಳ ಸಮ್ಮಿಲಿತ ಪ್ರವಾಹ ಈ ನಾಟಕ. “ಅಪೂರ್ಣರು' ಎಂಬ ಅರ್ಥವನ್ನು ದ್ಯೋತಿಸುವ ಈ ನಾಟಕ ನಮ್ಮ ಜೀವನದ ಒಂದು ಗಾಢ ಅನುಭವವನ್ನು ನಿಕಷಕ್ಕೆ ಒಡ್ಡುತ್ತದೆ. ವಿಶಿಷ್ಟ ಭಾಷಾ ಪ್ರಯೋಗವನ್ನು ಬಳಸಿಕೊ೦ಡಿರುವ ಇಲ್ಲಿಯ ಸಂವಾದ ವಿಧಾನ ಸಹ ಈ ನಾಟಕದ ಮಹತ್ವದ ಅಂಗವಾಗಿದೆ.
ಹೆಣ್ಣು ಗಂಡಿನ ಬದುಕಿನಲ್ಲಿ ಮೂಡುವ ಆಕರ್ಷಣೆ, ವಿಕರ್ಷಣೆಗಳ ಜೀವಂತ ಚಿತ್ರಣ ಇಲ್ಲಿದೆ. ಆಧುನಿಕ ಸಮಾಜದಲ್ಲಿ ಕೌಟುಂಬಿಕ ಜೀವನ ವಿಚ್ಛಿದಗೊಳ್ಳುವ ಹೃದಯಸ್ಪರ್ಶಿ ಕಥೆಯಿದೆ. ಮಾನವ ಮನದ ಸಂತೋಷ ಅಸಂತೋಷಗಳ ಅಪೂರ್ಣತೆಯ ಚಿತ್ರಣವಿದೆ. ವ್ಯಕ್ತಿಗಳು ಭಿನ್ನರಾಗಿದ್ದರೂ ಅವರ ನಡೆಯಲ್ಲಿ ಇಣುಕುವ ಏಕಸೂತ್ರತೆಯ ವಿಶ್ಲೇಷಣೆಯಿದೆ. ಒಬ್ಬನೇ ನಟನು ಐದು ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸುವ ರಂಗ ಚಾತುರ್ಯ ಮತ್ತು ರಂಗ ಸಂಯೋಜನೆಯನ್ನು ರಾಕೇಶ್ ಯಶಸ್ವಿಯಾಗ ನಿರ್ವಓ:ದ್ದಾರೆ.
























