ಶಾಂತಿ ಬ್ರಿಗೇಡ್ - ಯುವಜನತೆಯಿಂದ ಯುವಜನತೆಗಾಗಿ
ಈ ನಾಟಕವು ಇತ್ತೀಚಿನ ರಾಜಕೀಯ ಬದಲಾವಣೆಗಳು, ಅದು ಈಗಿನ ಯುವ ಮನಸ್ಸುಗಳ ಮೇಲೆ ಬೀರುತ್ತಿರುವ ಪರಿಣಾಮಗಳು ಮತ್ತು ಅ ದರ ಅಪಾಯವನ್ನು ತೀವ್ರವಾಗಿ ಅನಾವರಣ ಮಾಡುತ್ತದೆ. ಒಂದು ಕಾಲ್ಪನಿಕ ಹಳ್ಳಿಯಲ್ಲಿ, ಎರಡು ಯುವ ಗುಂಪುಗಳ ನಡುವೆ ನಡೆಯುವ ರಾಜಕೀಯ ಸೈದ್ದಾಂತಿಕ ಸಂಘರ್ಷ ಈ ನಾಟಕದ ತಿರುಳು- ಭಗವಂತನೆಂದೇ ಆರಾಧಿಸಲ್ಪಡುವ ರಾಜಕೀಯ ಧುರೀಣನೊಬ್ಬನನ್ನು ಆರಾಧಿಸುವ ರಾಜಾ ಬ್ರಿಗೇಡ್ ನ ಯುವಕರ ಗುಂಪು ಮತ್ತು ರಾಜಕೀಯವನ್ನು ತಿರಸ್ಕರಿಸಿ ಸ್ವತಂತ್ರ ಜೀವಿಗಳೆಂದು ಎಂದು ಕರೆಯಿಸಿಕೊಳ್ಳಲು ಇಚ್ಚಿಸುವ ಶಾಂತಿ ಬ್ರಿಗೇಡ್ ಎಂಬ ಮತ್ತೊಂದು ಗುಂಪು -ಈ ಎರಡೂ ಗುಂಪುಗಳ ರಾಜಕೀಯ ದೃಷ್ಟಿಕೋನ ಮತ್ತು ಅದನ್ನು ಪ್ರತಿಪಾದಿಸುವಲ್ಲಿ ನಡೆಯುವ ನಾಟಕದ ಪಾತ್ರಗಳ ಸ್ವಾಭಿಮಾನದ ತೀವ್ರತೆಯು ಅವರೇ ಊಹಿಸದ ರಾಜಕೀಯ ಸುಳಿಯಲ್ಲಿ ಸಿಕ್ಕಿಸಿಬಿಡುತ್ತವೆ.
ಜಾ ಫಕೋಲಿ, ಸೋಫೀ ಸ್ಕೋಲ್ನ "White Rose" ಚಳುವಳಿ, ಮತ್ತು ಜರ್ಮನಿಯ "Wandervogel' ನಂತಹ ಅನೇಕ ಪ್ರತಿರೋ ಧದ ಹಾದಿ ಹಿಡಿದ ಯುವ ಚಳುವಳಿಕಾರರ ಜೀವನವು ಈ ನಾಟಕಕ್ಕೆ ಪ್ರೇರಣೆ. ಈಗಿನ ಯುವ ಪ್ರೇಕ್ಷಕರಿಗೆ ಒಂದು ಪ್ರಮುಖ ಪ್ರಶ್ನೆಯನ್ನು ಮುಂದಿಡುತ್ತದೆ - ಅದು ಈ ನಿಜವಾದ ಸ್ವಾತಂತ್ರ್ಯ ಎನ್ನುವುದು ಎಲ್ಲಿದೆ?
























