ಗುಣಮುಖ, ಪಿ ಲಂಕೇಶ್ ಅವರು ಬರೆದಿರುವ ನಾಟಕ. ಇದು ನಾದಿರ್ ಶಾ ದೆಹಲಿಯನ್ನು ಆಕ್ರಮಿಸಿದ ನಂತರದ ಕಾಲಘಟ್ಟವನ್ನು ವಿವರಿಸುತ್ತದೆ. ನಾಟಕ ಆರಂಭವಾಗುವಾಗಲೇ ಎಲ್ಲವೂ ನಾಶವಾಗಿದೆ. ಯುದ್ಧ ಮುಗಿದಿದೆ, ಆದರೆ ಅದರ ಪರಿಣಾಮ ಈ ಅರಸನ ಮನಸ್ಸನ್ನು ಕಾಡುತ್ತಿದೆ. ಹಿಂದೂಸ್ಥಾನಕ್ಕೆ ಬಂದ ನಂತರ ನಾದಿರ್ ಶಾ ಒಂದೊಂದಾಗಿ ವಿಚಿತ್ರವಾದ, ಅಶಾಂತಗೊಳಿಸುವ ಸಂದರ್ಭಗಳನ್ನು ಎದುರಿಸುತ್ತಾನೆ. ಅವನ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಅವನ ಸುತ್ತಲಿನ ಯಾರ ಮೇಲೂ ಅವನಿಗೆ ನಂಬಿಕೆ ಇಲ್ಲ. ಸಾದತ್ ಖಾನ್ ಮತ್ತು ಮುಲ್ಕ್ ಮುಂತಾದ ಸಚಿವರು ನುಡಿಯುವ ಮಾತುಗಳಲ್ಲಿ ಸತ್ಯದ ಸುಳಿವೇ ಕಾಣುತ್ತಿಲ್ಲ. ಅವರು ಮೆಚ್ಚುಗೆಯ ಮಾತುಗಳನ್ನು ಆಡುತ್ತ ತಮ್ಮ ದುರ್ಬಲ ಜೀವನಗಳನ್ನು ಉಳಿಸಿಕೊಳ್ಳಲು ಬೇಕಾದರೆ ತಮ್ಮದೇ ಅರಸನನ್ನು ಕೆಡವಲು ಹೊರಗಿನವರನ್ನು ಕರೆಯಲು ಅಥವಾ ಪಾಳೆಯ ಬದಲಾಯಿಸಲು ಕೂಡ ಹಿಂಜರಿಯುವುದಿಲ್ಲ. ನಾದಿರ್ ಶಾ ಸುಳ್ಳನ್ನು ದ್ವೇಷಿಸುವ ವ್ಯಕ್ತಿ. ಆದರೆ ಈ ಸುಳ್ಳಿನ ನಿಷ್ಠೆಯಿಂದ ತುಂಬಿದ ಜಗತ್ತಿನಲ್ಲಿ ಸಿಲುಕಿಕೊಂಡಿರುವ ಅವನಿಗೆ ಹಿಂದುಸ್ಥಾನದಲ್ಲೇ ಇದ್ದುಬಿಡಬೇಕೋ, ಇಲ್ಲಿಂದ ಹೊರಟು ಬಿಡಬೇಕೋ ಎಂಬ ಪ್ರಶ್ನೆಯು ಅವನ ದೇಹ ಮತ್ತು ಮನಸ್ಸನ್ನು ನಿಧಾನವಾಗಿ ಕುಸಿದು ಹಾಕತೊಡಗುತ್ತದೆ. ಈ ರಾಜಕೀಯ ಕುತಂತ್ರಗಳ ನಡುವೆಯೇ ವೃದ್ಧ ವೈದ್ಯನೊಬ್ಬ ಸಚಿವರಿಗಿಂತ ಭಿನ್ನವಾಗಿ ಭಯವಿಲ್ಲದೆ, ಮೋಸವಿಲ್ಲದೆ ಮಾತನಾಡುತ್ತಾನೆ. ಈ ಶಾಂತ ಮತ್ತು ಸತ್ಯಭರಿತ ಸಂಭಾಷಣೆಯ ಮೂಲಕ ನಾದಿರ್ ಶಾನ ಮತ್ತೊಂದು ಮುಖ ನಿಧಾನವಾಗಿ ಹೊರಬರುತ್ತದೆ. ಕ್ರೂರತೆ ಮತ್ತು ಹಿಂಸೆಯ ಹಿಂದೆ ಇರುವುದು ಒಬ್ಬ - ಒಂಟಿತನ, ಭಯ ಮತ್ತು ತಪ್ಪಿನ ಭಾರ ಹೊತ್ತ ಒಬ್ಬ ಸರಳ ಮನುಷ್ಯ ಎಂದು ತೋರಿಸುತ್ತದೆ. ಈ ಎಲ್ಲ ಸಂಧರ್ಭಗಳ ಮೂಲಕ ಗುಣಮುಖ ಸುಳ್ಳು, ದ್ರೋಹ, ಮತ್ತು ನಿಯಂತ್ರಣವಿಲ್ಲದ ಅಧಿಕಾರ ಹೇಗೆ ತನ್ನದೇ ಕೃತ್ಯಗಳ ಪರಿಣಾಮಗಳನ್ನು ಎದುರಿಸುತ್ತಾನೆ - ಯುದ್ಧ ಭೂಮಿಯಲ್ಲಲ್ಲ, ತಪಿಸಿಕೊಳ್ಳಲಾಗದ ಮನಸ್ಸೆಂಬ ರಂಗದಲ್ಲಿ ಎಂದು ತೋರಿಸುತ್ತದೆ.
























