top of page

SEVANTI PRASANGA

NAGARJUNA DEGREE COLLEGE

Tuesday, February 17, 2026

BENGALURU
SOURABHA 2026

ಸಮಾಜದಲ್ಲಿ ಉಳ್ಳವರು ಇಲ್ಲದವರ ಬದುಕನ್ನು ತಮ್ಮ ಸ್ವಾಥ೯ಕ್ಕೆ ಬಳಸಿಕೊಂಡು ಅವರ ಬಾಳನ್ನು ತಮಗೆ ಹೇಗೆ ಬೇಕೋ ಹಾಗೆ ಬದಲಿಸಿಕೊಳ್ಳುತ್ತಾರೆ. "ಮುಗ್ಧ ಜನರನ್ನು ಅವರಿರುವಂತೆಯೇ ಬದುಕಲು ಬಿಡಿ" ಎಂಬ ಸಂದೇಶ ಸಾರುತ್ತಾ ನಮ್ಮ ಮುಗ್ಧ, ತಿಪ್ಪೇಕ್ರಾಸಿನ ಬಲೂನ್‌ ಮಾರುವ ಹುಡುಗಿ; ಆದರೆ ತನ್ನ ಕಣ್ಣುಗಳಲ್ಲಿ ಪುಟ್ಟ ಕನಸು ಹೊತ್ತ ʼಸೇವಂತಿʼ ತಮ್ಮ ಮುಂದೆ ಬರುತ್ತಿದ್ದಾಳೆ. ಸೇವಂತಿ ಪ್ರಸಂಗ “ ರೂಪಾಂತರವನ್ನು ನಾಗಾಜು೯ನ ಕಾಲೇಜಿನ “ ರಂಗ ಚೈತನ್ಯ “ ತಂಡ ರಂಗದ ಮೇಲೆ ಹೊತ್ತು ತಂದಿದೆ. “ಯಾಕ್ಕೆತ್ ಕೊಂಡ್ಯೋ ನನ್ನಾ ತಿಪ್ಪೇ ಕ್ರಾಸಿಂದಾ?” ಎಂಬ ಸೇವಂತಿಯ ಮಾತು ಅವಳ ಬದಲಾದ ಬದುಕಿನ ಆಕ್ರೋಶ , ಅಸಹಾಯಕತೆ ಹಾಗು ಸಂಕಟಗಳನ್ನು ಧ್ವನಿಸುತ್ತದೆ.


ತಿಪ್ಪೇಕ್ರಾಸಿನಲ್ಲಿ ತನ್ನ ಜೀವನೋಪಾಯಕ್ಕೆ ಬಲೂನುಗಳನ್ನು ಮಾರುತ್ತಿದ್ದ ಸೇವಂತಿಯನ್ನು , ಭಾಷಾ ವಿದ್ವಾಂಸನಾದ ಭಾಗ೯ವ ಶಾಸ್ತ್ರಿ ಹೈಕ್ಲಾಸ್ ಲೇಡಿ , ಮಿಸ್ ಸೇವಂತಿಯಾಗಿ ಮಾಡಲು ಸವಾಲು ಸ್ವೀಕರಿಸುತ್ತಾನೆ. ಅವಳ ನಡೆ , ನುಡಿ, ವೇಷವನ್ನು ಬದಲಿಸಲು ಹರಸಾಹಸ ಮಾಡುತ್ತಾನೆ. ಕೊನೆಗೂ ಅವಳನ್ನು ಮಿಸ್ ರಾಜಧಾನಿಯನ್ನಾಗಿ ಮಾಡುವಲ್ಲಿ ವಿಜಯಶಾಲಿಯಾಗುತ್ತಾನೆ. ತನ್ನ ಸ್ವಾಥ೯ಕ್ಕೆ ಬಳಸಿಕೊಂಡ ಭಾಗ೯ವನ ಮುಖವಾಡ ಕಳಚಿದಂತೆ ಸೇವಂತಿ ತನ್ನ ತ್ರಿಶಂಕು ಸ್ಥಿತಿಯನ್ನು ನೆನೆದು ಕಂಗಾಲಾಗುತ್ತಾಳೆ, ಅವನ ಮನೆ ಭಾಷಾಂಬುಧಿಯಿಂದ ಹೊರ ಬಂದು ಮತ್ತೆ ತಿಪ್ಪೇಕ್ರಾಸ್ ಸೇರುತ್ತಾಳೆ. ಇದರ ಮಧ್ಯೆ ಅವರಿಬ್ಬರಲ್ಲೂ ಪ್ರೀತಿ ಅಂಕುರಿಸಿ ಸೇವಂತಿಯನ್ನು ತನ್ನೊಂದಿಗೆ ಕರೆದೊಯ್ಯಲು ಭಾಗ೯ವ ಬರುವ ಸನ್ವಿವೇಶದೊಂದಿಗೆ ನಾಟಕ ಕೊನೆಗೊಳ್ಳುತ್ತದೆ.ಪ್ರೀತಿಯ ಮಳೆ ಮನುಷ್ಯನ ಎಲ್ಲಾ ತಾರತಮ್ಯತೆಗಳನ್ನು ಅಳಿಸಿ ಹಾಕುತ್ತದೆ ಎಂಬುದು ನಾಟಕದ ಅಂತ್ಯದಲ್ಲಿ ವೇದ್ಯವಾಗುತ್ತದೆ.

  • Facebook
  • Instagram
  • Youtube

© 2024 Rangasourabha | Kannada Theatre

bottom of page