ಶಾಂತಿ ಬ್ರಿಗೇಡ್ - ಯುವಜನತೆಯಿಂದ ಯುವಜನತೆಗಾಗಿ
ಈ ನಾಟಕವು ಇತ್ತೀಚಿನ ರಾಜಕೀಯ ಬದಲಾವಣೆಗಳು, ಅದು ಈಗಿನ ಯುವ ಮನಸ್ಸುಗಳ ಮೇಲೆ ಬೀರುತ್ತಿರುವ ಪರಿಣಾಮಗಳು ಮತ್ತು ಅದ ರ ಅಪಾಯವನ್ನು ತೀವ್ರವಾಗಿ ಅನಾವರಣ ಮಾಡುತ್ತದೆ. ಒಂದು ಕಾಲ್ಪನಿಕ ಹಳ್ಳಿಯಲ್ಲಿ, ಎರಡು ಯುವ ಗುಂಪುಗಳ ನಡುವೆ ನಡೆಯುವ ರಾಜಕೀಯ ಸೈದ್ದಾಂತಿಕ ಸಂಘರ್ಷ ಈ ನಾಟಕದ ತಿರುಳು- ಭಗವಂತನೆಂದೇ ಆರಾಧಿಸಲ್ಪಡುವ ರಾಜಕೀಯ ಧುರೀಣನೊಬ್ಬನನ್ನು ಆರಾಧಿಸುವ ರಾಜಾ ಬ್ರಿಗೇಡ್ ನ ಯುವಕರ ಗುಂಪು ಮತ್ತು ರಾಜಕೀಯವನ್ನು ತಿರಸ್ಕರಿಸಿ ಸ್ವತಂತ್ರ ಜೀವಿಗಳೆಂದು ಎಂದು ಕರೆಯಿಸಿಕೊಳ್ಳಲು ಇಚ್ಚಿಸುವ ಶಾಂತಿ ಬ್ರಿಗೇಡ್ ಎಂಬ ಮತ್ತೊಂದು ಗುಂಪು -ಈ ಎರಡೂ ಗುಂಪುಗಳ ರಾಜಕೀಯ ದೃಷ್ಟಿಕೋನ ಮತ್ತು ಅದನ್ನು ಪ್ರತಿಪಾದಿಸುವಲ್ಲಿ ನಡೆಯುವ ನಾಟಕದ ಪಾತ್ರಗಳ ಸ್ವಾಭಿಮಾನದ ತೀವ್ರತೆಯು ಅವರೇ ಊಹಿಸದ ರಾಜಕೀಯ ಸುಳಿಯಲ್ಲಿ ಸಿಕ್ಕಿಸಿಬಿಡುತ್ತವೆ.
ಜಾ ಫಕೋಲಿ, ಸೋಫೀ ಸ್ಕೋಲ್ನ "White Rose" ಚಳುವಳಿ, ಮತ್ತು ಜರ್ಮನಿಯ "Wandervogel' ನಂತಹ ಅನೇಕ ಪ್ರತಿರೋಧ ದ ಹಾದಿ ಹಿಡಿದ ಯುವ ಚಳುವಳಿಕಾರರ ಜೀವನವು ಈ ನಾಟಕಕ್ಕೆ ಪ್ರೇರಣೆ. ಈಗಿನ ಯುವ ಪ್ರೇಕ್ಷಕರಿಗೆ ಒಂದು ಪ್ರಮುಖ ಪ್ರಶ್ನೆಯನ್ನು ಮುಂದಿಡುತ್ತದೆ - ಅದು ಈ ನಿಜವಾದ ಸ್ವಾತಂತ್ರ್ಯ ಎನ್ನುವುದು ಎಲ್ಲಿದೆ?
























