ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕವು ಅವರ ಅತ್ಯುತ್ತಮ ನಾಟಕವಾಗಿದೆ. ನಾಟಕದ ಮುಖ್ಯ ಪಾತ್ರದಾರಿ ರಾಣಿಗೆ ಅಪ್ಪಣ್ಣ ಎಂಬ ಶ್ರೀಮಂತ ನೋಡಣೆ ಮಾಡುವೆಯಾಗಿರುತ್ತದೆ.ಸದಾ ಸೂಳೆಯಮನೆ, ಗರಡಿಮನೆಯಲ್ಲೇ ವ್ಯಸ್ತನಾಗಿರುವ ಅಪ್ಪಣ್ಣ ಹೆಂಡತಿಯನ್ನು ಮನೆಯಲ್ಲೇ ಕೂಡಿ ಹಾಕಿ ಹೊರಡುವುದು ಚಾಳಿ ಮಾಡಿಕೊಂಡಿರುತ್ತಾನೆ. ಅವನ ತಾಯಿಯ ಗೆಳತಿಯಾದ ಕುರುಡವ್ವ ಹಾಗೂ ಅವಳ ಮಗ ಕಪ್ಪಣ್ಣ, ರಾಣಿಯ ಕುರಿತು ಮಮತೆಯುಳ್ಳವರು ಅವರ ಜೀವನ ಸರಿ ಮಾಡಲು, ಆಕೆಗೆ ಕುರುಡವ್ವನ ಜೀವನಕ್ಕೆ ದಾರಿ ಯಾದ ಬೇರೊಂದನ್ನು ಕೊಡುತ್ತಾರೆ. ಆ ಬೇರನ್ನು ಅರೆದು ಬಳಸಲು ಅದರ ರೂಪವನ್ನು ಕಂಡು ಹೆದರಿದ ರಾಣಿ ಅದನ್ನು ಹುಟ್ಟದ ಬಳಿ ಎಸೆಯುತ್ತಾಳೆ. ಅದರ ಪರಿಣಾಮ ಹುಟ್ಟದಲ್ಲಿದ್ದ ಹಾವಿಗೆ ಆಕೆಯ ಮೇಲೆ ಮನಸಾಗಿ ಅವಳನ್ನು ಮನುಷ್ಯರೂಪದಲ್ಲಿ ಅಂದರೆ ಅಪಣ್ಣನ ರೂಪದಲ್ಲಿ ಸೇರುತ್ತದೆ. ಇತ್ತ ಹೆಂಡತಿ ಬಸುರಿಯಾದ ಸುದ್ದಿ ಕೇಳಿದ ಅಪ್ಪಣ್ಣ, ಗಲಾಟೆ ಎಬ್ಬಿಸಿ ಪಂಚಾಯಿತಿಯಲ್ಲಿ ಅವಳಿಗೆ ಛೀಮಾರಿ ಹಾಕಿಸುತ್ತಾನೆ. ರಾಣಿ ತಾನು ತಪ್ಪು ಮಾಡಿಲ್ಲವೆಂದು ಎಷ್ಟೇ ಗೋಗರೆದರೂ ನಂಬುವುದಿಲ್ಲ. ಕೊನೆಗೆ ಹಲವಾರು ಪರೀಕ್ಷೆಗಳಲ್ಲಿ ಒಂದಾದ್ ' ನಾಗದಿವ್ಯ 'ಮಾಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾ. ಹುತ್ತ ದಲ್ಲಿರುವ ಹಾವನ್ನು ಹಿಡಿದು ಪ್ರಮಾಣ ಮಾಡಿದ ರಾಣಿಯನ್ನು ಹಾವು ಏನೂ ಮಾಡುವುದಿಲ್ಲ. ಆಕೆ ಮಹ ಪತಿವ್ರತೆಯೆಂಬು, ಸಾದ್ವಿಯೆಂದು ಸಾಬೀತಾಗುತ್ತದೆ. ಅಪ್ಪನ್ನ ಕೊನೆಗೆ ಅವಳಿಗೆ ಸೋತು ಒಪ್ಪಿಕೊಳ್ಳುತ್ತಾನೆ. ಕಥೆಗೆ, ನಾಗಪ್ಪನ ಸ್ಥಿತಿ ಏನಾಯಿತೆಂದು ಮನುಷ್ಯ ಕೇಳಲು ಅದು ಎರಡು ರೂಪದಲ್ಲಿ ವಿವರಿಸುತ್ತದೆ. ಒಂದರಲ್ಲಿ ನಾಗಪ್ಪ ರಾಣಿಯ ಕೂದಲಿಗೆ ನೇಣು ಹಾಕಿಕೊಂಡು ಸಾಯುತ್ತಾನೆ. ಇನ್ನೊಂದರಲ್ಲಿ ರಾಣಿಯ ಮುಡಿಯಲ್ಲಿ ಮಗುವಾಗಿ ಉಳಿಯುತ್ತಾನೆ. ಅಲ್ಲಿ ನಾಗಮಂಡಲದ ಕಥೆ ಮುಗಿಯುತ್ತದೆ.
























