top of page

SAHEBRU BARTARE

SSMRV COLLEGE

Saturday, February 21, 2026

BENGALURU
SOURABHA 2026

“ಸಾಹೇಬರು ಬರುತ್ತಾರೆ” ಈ ನಾಟಕದಲ್ಲಿ ಸಮಾಜದಲ್ಲಿನ ಭ್ರಷ್ಟಾಚಾರ, ಲಂಚ, ಮೋಸ ಮತ್ತು ಅಧಿಕಾರಿಗಳ ಭಯಗಳನ್ನು ಹಾಸ್ಯಮಯವಾಗಿ ತೋರಿಸಲಾಗಿದೆ. ಒಂದು ಸಣ್ಣ ಪಟ್ಟಣದ ಮೇಯರ್ ಮತ್ತು ಇತರ ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸಗಳಲ್ಲಿ ಸತ್ಯಸಂಧರಾಗಿರಲಿಲ್ಲ. ಅವರು ಲಂಚ ತಗೊಳ್ಳುವುದು, ಜನರನ್ನು ಮೋಸ ಮಾಡುವುದು ಸಾಮಾನ್ಯವಾಗಿತ್ತು. ಒಂದು ದಿನ ಸರ್ಕಾರದಿಂದ ಗುಪ್ತ ಪರಿಶೀಲನೆಗೆ ಒಬ್ಬ ಸಾಹೇಬರು ಬರುತ್ತಾರೆ ಎಂಬ ಸುದ್ದಿ ಬರುತ್ತದೆ. ಇದನ್ನು ಕೇಳಿ ಎಲ್ಲ ಅಧಿಕಾರಿಗಳು ಭಯದಿಂದ ನಡುಗುತ್ತಾರೆ. ತಮ್ಮ ತಪ್ಪುಗಳನ್ನು ಮುಚ್ಚಲು ಪ್ರಯತ್ನಿಸುತ್ತಾರೆ. ಅದೇ ಸಮಯದಲ್ಲಿ, ಒಬ್ಬ ಸಾಮಾನ್ಯ ಯುವಕ ಪಟ್ಟಣಕ್ಕೆ ಬರುತ್ತಾನೆ. ಅಧಿಕಾರಿಗಳು ಅವನನ್ನೇ ಸಾಹೇಬರು ಎಂದು ತಪ್ಪಾಗಿ ಭಾವಿಸುತ್ತಾರೆ. ಅವನಿಗೆ ವಿಶೇಷ ಗೌರವ ಕೊಡುತ್ತಾರೆ, ಹಣ, ಉಡುಗೊರೆ, ಲಂಚ ಎಲ್ಲವನ್ನೂ ಕೊಡುತ್ತಾರೆ. ಯುವಕ ಇದನ್ನು ಬಳಸಿಕೊಂಡು ಎಲ್ಲರಿಂದ ಹಣ ಪಡೆದು, ಸುಳ್ಳು ಮಾತುಗಳಿಂದ ಅವರನ್ನು ಮೋಸ ಮಾಡುತ್ತಾನೆ. ನಂತರ ಅವನು ಪಟ್ಟಣದಿಂದ ಓಡಿ ಹೋಗುತ್ತಾನೆ. ಕೊನೆಯಲ್ಲಿ, ಅವನು ನಿಜವಾದ ಸಾಹೇಬರು ಅಲ್ಲ ಎಂಬುದು ಗೊತ್ತಾಗುತ್ತದೆ. ಅಷ್ಟರಲ್ಲಿ ನಿಜವಾದ ಸಾಹೇಬರು ಬಂದಿದ್ದಾರೆ ಎಂಬ ಸುದ್ದಿ ಬರುತ್ತದೆ. ಎಲ್ಲ ಅಧಿಕಾರಿಗಳು ಭಯದಿಂದ ಮೌನವಾಗುತ್ತಾರೆ.

  • Facebook
  • Instagram
  • Youtube

© 2024 Rangasourabha | Kannada Theatre

bottom of page