ಗಾಂಧಾರ ದೇಶದ ರಾಜ ಸುಬಾಹು ಹಾಗೂ ಅವನ ಪ್ರಿಯತಮೆಯ ವಿವಾಹದ ಸಮಾರಂಭದಲ್ಲಿ ರಾಜ ಹಾಗೂ ಅವರ ಪ್ರಿಯತಮೆ ಸುಖಸ್ವಪ್ನಗಳನ್ನು ಕಾಣುತ್ತಿರುತ್ತಾರೆ. ಆ ಸಮಯದಲ್ಲಿ ಪ್ರಸ್ತಾರಸೇನ ರಾಜನ ಆಪ್ತ ತನ್ನ ಮಗಳ ಪ್ರೇಮಕಥೆಯನ್ನು ರಾಜನಿಗೆ ಒಪ್ಪಿಸಲು ಮಗಳು, ಅವಳ ಪ್ರಿಯತಮ ಧೃತಿವರ್ಮ ಹಾಗೂ ತನ್ನ ಮಗಳಾದ ಉರ್ಮಿಳೆಯನ್ನು ವಿವಾಹವಾಗಬೇಕೆಂದುಕೊಂಡಿರುವ ದೃಢವರ್ಮನನ್ನು ಕರೆತಂದನು. ರಾಜನು ಪ್ರೇಮಕಥೆಯನ್ನು ಕೇಳಿ. ಅವರ ತಂದೆಯ ಆಜ್ಞೆಯಿಲ್ಲದ ಕಾರಣ ನೀನು ದೃಢವರ್ಮನನ್ನು ಮದುವೆಯಾಗಬೇಕು, ಇಲ್ಲವಾದಲ್ಲಿ ಕಠಿಣವಾದ ಶಿಕ್ಷೆಯನ್ನು ಅನುಭವಿಸಲು ಸಿದ್ಧಳಾಗಿರಬೇಕು ಎಂದು ಆಜ್ಞೆಯನ್ನು ಮಾಡುತ್ತಾರೆ. ಆಗ ಧೃತಿವರ್ಮ ಮತ್ತು ಉರ್ಮಿಳೆಯು ಈ ಊರನ್ನು ಬಿಟ್ಟು ಹೋಗುವ ಯೋಚನೆ ಮಾಡುತ್ತಾರೆ. ಆ ಹೊತ್ತಿನಲ್ಲಿ ಉರ್ಮಿಳೆಯ ಜೀವದ ಗೆಳತಿಯಾಗಿರುವ ಶ್ಯಾಮಲೆಯನ್ನು ಕಂಡು ಊರ್ಮಿಳೆಯು ತಾವು ಊರನ್ನು ಬಿಟ್ಟು ಹೋಗುತ್ತಿರುವ ವಿಷಯವನ್ನು ತಿಳಿಸುತ್ತಾರೆ. ಶ್ಯಾಮಲೆಗೆ ದೃಢವರ್ಮನನ್ನು ಕಂಡರೆ ಪ್ರೀತಿ. ಆದರೆ ದೃಢವರ್ಮನಿಗೆ ಶ್ಯಾಮಲೆ ಮೇಲೆ ಪ್ರೀತಿ ಇರುವುದಿಲ್ಲ. ಉರ್ಮಿಳೆಯ ಮೇಲೆ ಪ್ರೀತಿ ಇರುತ್ತದೆ. ಈ ವಿಷಯವನ್ನು ಶ್ಯಾಮಲೆ ದೃಢವರ್ಮನಿಗೆ ತಿಳಿಸುತ್ತಾಳೆ. ದೃಢವರ್ಮ ಉರ್ಮಿಳೆಯನ್ನು ಹುಡುಕಲು ಹೊರಟಾಗ ಅಲ್ಲಿ ನಡೆಯುವ ಸಂಗತಿಗಳೆಲ್ಲ ಚಮತ್ಕಾರಯುತವಾಗಿರುತ್ತವೆ.
























